ಶೀರ್ಷಿಕೆ – ನರನ ಮೃತ್ಯುಂಜಯತೆ
ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ಬಿದ್ದ ಮನೆಯನು ಕಟ್ಟೊ – ಮಂಕುತಿಮ್ಮ|| 474 ||
ಗೌರವಿಸು ಜೀವನವ, ಗೌರವಿಸು ಚೇತನವ ಆರದೋ ಜಗವೆಂದು ಛೇದವೆಣಿಸದಿರು ಹೋರುವುದೇ ಜೀವನಸಮೃದ್ಧಿಗೋಸುಗ ನಿನಗೆ ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ|| 475 ||
ಜೀವನೋದ್ಯಮವೆಲ್ಲ ತೋಟದುದ್ಯೋಗವೆನು ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಸೇವೆಯದು ಬೊಮ್ಮಂಗೆ – ಮಂಕುತಿಮ್ಮ|| 476 ||
ಹೂವ ತಳೆದ ಗುಲಾಬಿಯಿಂದ ಮನಕಹುದೇನು? ನೋವೋ?ಸಂತಸವೋ?ನೋಡಾಮುಳ್ಳು ಬಾಳ್ಗೆ ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ ಜೀವನದ ತಿರುಳಷ್ಟೇ – ಮಂಕುತಿಮ್ಮ|| 477 ||
ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು ಮುಗುಳು ದುಡಿತಕೆ ತಣಿಸು – ಮಂಕುತಿಮ್ಮ|| 478 ||