ಶೀರ್ಷಿಕೆ – ಕವಿ-ರಾಜ್ಯಕ
ಸೌಂದರ್ಯವೊಂದು ದೈವರಹಸ್ಯ ಸೃಷ್ಟಿವೊಲು ನಿಂದಿರ್ಪುದದರಾಶೆಯಿನೆ ಜೇವಿತಾಶೆ ಅಂದುವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ ಚೆಂದದರಿವೆ ತಪಸ್ಸೊ – ಮಂಕುತಿಮ್ಮ|| 469 ||
ವಿವಿಧರಸಗಳ ಭಟ್ಟಿ, ಸೌಂದರ್ಯಕಾಮೇಷ್ಟಿ ಕವಿಜಗತ್ಸ್ಹ್ರುಷ್ಟಿಯದು ಕಲೆಗನಾಕೃಷ್ಟಿ ಗವಿಯೊಳಗಣ ಪ್ರಕೃತಿಯಂತ್ರ,ವೈಚಿತ್ರ್ಯವದು ತಪಸೊಂದೆ ಪಥವದಕೆ – ಮಂಕುತಿಮ್ಮ|| 470 ||
ಮಂದಿರದ ಶಿಲ್ಪಿ ಯಂತ್ರಗಳ ಯೋಜಕ ರಾಜ್ಯ- ಸಂಧಾನಿ ವಿಜ್ಞಾನಿಯುದ್ಯೋಗದಾನಿ ಮಂದಿ ಮುಂದಾಳು ಜನಬಾಂಧವ್ಯಪೋಷಕನು ಸೌಂದರ್ಯಕರರಿವರು – ಮಂಕುತಿಮ್ಮ|| 471 ||
ಕವಿ ಚಿತ್ರಕೋವಿದನು ಪರತತ್ವಶೋಧಕನು ವಿವಿಧ ವಾದನ ಗೀತ ನೃತ್ಯ ಕುಶಲಿಗಳು ನವನವತೆಯಂ ಮನಸಿಗೀವೆಲ್ಲ ಕಲೆಗಾರ- ರವರಿಂದ ಸುಂದರತೆ – ಮಂಕುತಿಮ್ಮ|| 472 ||
ಪಾರಿಜಾತವ ಕಂಡು ನಿಡುಸುಯ್ದು, ಪದಗಳಿಂ ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ಊರಿನುದ್ಯಾನಕದ ತರಿಸಿ ಬೆಳೆಸುವ ಕಾರ್ಯ ಧೀರನಲ ರಾಜ್ಯಕನು – ಮಂಕುತಿಮ್ಮ|| 473 ||