ಶೀರ್ಷಿಕೆ – ಸಾರ್ಥಕತೆಯ ಸತ್ಯ
ಸತ್ಯವೆಂಬುದದೇನು ಸೈನಿಕನ ಜೀವನದಿ? ಕತ್ತಿಯವನಿಗೆ ಸತ್ಯವದರಿಂದೆ ಧರ್ಮ ಭುಕ್ತಿ ಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ ಸಾರ್ಥಕಥೆಯಿಂ ಸತ್ಯ – ಮಂಕುತಿಮ್ಮ|| 479 ||
ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ ಬೇಸರದ ನುಡಿಯೋಳಂ ಲೇಸುಗಳ ನೆನಪು ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ ಮಾಸವೀ ಜೀವಗುಣ – ಮಂಕುತಿಮ್ಮ|| 480 ||
ನಿಶಿ ಹಿಂದೆ, ನಿಶಿ ಮುಂದೆ,ನಡುವೆ ಮಿಸುಕಾಟ ಬಾಳ್ ನಿಶಿ ಕೆಲವರಿಗೆ ಸೊನ್ನೆ, ಕೆಲವರಿಗೆ ಗುಟ್ಟು ಮಸಕಿನಲಿ ಭೂತವೊಂದಿಹುದು, ದಿಟವಾದೊಡದ ರುಸಿರು ಸೋಕದೆ ನಿನ್ನ? – ಮಂಕುತಿಮ್ಮ|| 481 ||
ಗುಹೆಯಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- ರ್ವಹಿಸುವುದೇ ಜಾಣ್ಮೆಯಲ – ಮಂಕುತಿಮ್ಮ|| 482 ||
ಗಾಳಿಯನು ಗುದ್ದಿದರೆ ಮೈ ನೊಯ್ವುದೊಂದೆ ಫಲ ಮೂಲಸತ್ವವ ಮರೆತ ಸಾಹಸಗಳಂತು ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ ತಾಳಿ ಬಾಳಾವರೆಗೆ – ಮಂಕುತಿಮ್ಮ|| 483 ||