ಮಂಕುತಿಮ್ಮನ ಕಗ್ಗ (459 ರಿಂದ 463)

ಶೀರ್ಷಿಕೆ – ಜೀವ ಕಾವ್ಯ

ಹೃದಯಪುಷ್ಪಮರಂದವಾತ್ಮಕೆ ನಿಜಾನಂದ ಉದಿಪುದಾ ರಸ ಸುಂದರದ ಕಿರಣ ಸೋಕೆ ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ ಪುದಿದಿರ್ಪ ಕಾಂತಿಯದು – ಮಂಕುತಿಮ್ಮ|| 459 ||

ಜಗದ ಬಂದೀಗೃಹದಿ ಬಿಗಿಯುತಿರೆ ವಿಧಿ ನಿನ್ನ ನಿಗಮ ಸತ್ಕಲೆ ಕಾವ್ಯಗಳ ಗವಾಕ್ಷಗಳಿಂ ಗಗನದೊಳನಂತದರ್ಶನದ ಮುಕ್ತಿಯನೊಂದು ನಗುನಗಿಸಿ ಲೋಕವನ್ನು – ಮಂಕುತಿಮ್ಮ|| 460 ||

ರಾಮನುಂ ಭರತನುಂ ತಬ್ಬಿಕೊಂಡತ್ತಂದು ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ ಕ್ಷೇಮವದು ಜೀವಕ್ಕೆ – ಮಂಕುತಿಮ್ಮ|| 461 ||

ಪ್ರೀತಿಮಹಿಮೆಯ ಚಿತ್ರ ರೀತಿಯಂ ವಾಲ್ಮೀಕಿ ನೀತಿಸೂಕ್ಷ್ಮದ ಗಹನಮಾರ್ಗಮಂ ವ್ಯಾಸರ್ ಗೀತೆಯಲಿ ವಿಶ್ವಜೀವನರಹಸ್ಯವನವರ್ ಖ್ಯಾತಿಸಿಹರು ಕಾವ್ಯ – ಮಂಕುತಿಮ್ಮ|| 462 ||

ಹೃದಯಕ್ಕೊಪ್ಪುವ ಭಾಷೆ ರಾಗ ಲಯ ವಿಸ್ತಾರ ಪದ ಚರ್ಚೆ ಮತವಿಚಾರಕೆ ತಕ್ಕ ಭಾಷೆ ಹೃದಯ ಮತಿ ಸತಿಪತಿಗಳಂತಿರಲು ಯುಕ್ತವದು ಬದುಕು ರಸತರ್ಕೈಕ್ಯ – ಮಂಕುತಿಮ್ಮ|| 463 ||

Leave a Reply

Your email address will not be published. Required fields are marked *