ಶೀರ್ಷಿಕೆ – ಮೋಹ-ಕರುಣ-ಶಾಂತಿ
ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು ಕೆರಳಿಸಲು ನರಹೃದಯರಭಸಗಳನದರಿಂ ಪೊರಮಡುವ ಸಂಮೋಹಧೀರಗಂಭೀರಗಳ ಸರಸತೆಯ ಸುಂದರವೊ –ಮಂಕುತಿಮ್ಮ|| 454 ||
ಸುಂದರದ ರಸ ನೂರು; ಸಾರವದರೊಳು ಮೂರು ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ಒಂದರಿಂದೊಂದು ಬೆಳೆಯಾದಂದು ಜೀವನವು ಚೆಂದಗೊಂಡುಜ್ಜುಗವೋ –ಮಂಕುತಿಮ್ಮ|| 455 ||
ಪಿಡಿ ಗಳಿಸು ಭುಜಿಸೊಡೆಯನಾಗೆನ್ನುವುದು ಮೋಹ ಕೊಡು ಸಲಿಸು ಸೇವೆಗೈಯನ್ನುವುದು ಕರುಣೆ ಬಿಡು ನೀನು ನಾನುಗಳ, ವಿಶ್ವಾತ್ಮಪದವನೀ- ನಡರೆನ್ನುವುದು ಶಾಂತಿ – ಮಂಕುತಿಮ್ಮ|| 456 ||
ಚಾರುದೃಶ್ಯಗಳಿಂ ಪ್ರೀತಿ ಹೃದಯವಿಕಾಸ ಕ್ರೂರದೌಷ್ಟ್ಯಂಗಳಿಂ ವೀರಾನುಕಂಪ ಭೈರವಾದ್ಭುತಗಳಿಂ ಮೌನದಂತರ್ಮನನ ದಾರಿಯುದ್ಧಾರಕಿವು – ಮಂಕುತಿಮ್ಮ|| 457 ||
ಹಿಂದಣದುಳಿವಿರದು, ಮುಂದಣದರುಸಿರಿರದು ಒಂದರೆಕ್ಷಣ ತುಂಬಿ ತೋರುವುದನಂತ ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ ಸುಂದರದ ಲೋಕವದು – ಮಂಕುತಿಮ್ಮ|| 458 ||