ಅದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ “ಸೌಂದರ್ಯಲಹರಿ”ಯು ನೂರು ಶ್ಲೋಕಗಳನ್ನು ಹೊಂದಿದೆ. ಪ್ರಪಂಚದಲ್ಲಿ ಕಾಣುವ ಪ್ರತೀ ಶಕ್ತಿಯ ಅನುಸಂಧಾನವೇ ಸೌಂದರ್ಯ. ಸೌಂದರ್ಯದ ಹಿಂದೆ ಇಚ್ಛಾ, ಜ್ಞಾನ, ಕ್ರಿಯಾ ಶಕ್ತಿಯ ಒಗ್ಗೂಡುವಿಕೆ ಇರುತ್ತದೆ. ಅಂತರಂಗದ ಆನಂದವೇ ಬಹಿರಂಗದಲ್ಲಿ ಸೌಂದರ್ಯವಾಗಿ ಹೊರಹೊಮ್ಮುತ್ತದೆ.