ಶೀರ್ಷಿಕೆ – ಅತೀತ ಪದವಿ
ಘೋರವನು ಮೋಹವನು ದೇವತೆಗಳಾಗಿಪರು ಭೀರು ಯಾಚಕರಾಸ್ಥೆ ತಪ್ಪದಿರಲೆಂದು ಅರಿಂದಲೇಂ ಭೀತಿ, ಏಂ ಬಂದೊಡದ ಕೊಳುವ ಪಾರಮಾರ್ಥಿಕನಿಗೆಲೊ? – ಮಂಕುತಿಮ್ಮ|| 799 ||
ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ? ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ? ಉನ್ನತ ಶಿಖರದಿಂ ತಿಟ್ಟೇನು ಕುಳಿಯೇನು? ಪೂರ್ಣತೆಗೆ ಸೊಟ್ಟೇನು ? – ಮಂಕುತಿಮ್ಮ|| 800 ||
ಕೋಡುಗಲ್ಲನ್ನು ಹತ್ತಿ ದೂರವನು ನೋಳ್ಪಂಗೆ ಗೋಡೆಗೊತ್ತುಗಳೇನು ? ಮೇಡು ಕುಳಿಗಲೇನು? ನೋಡು ನೀನುನ್ನತದಿ ನಿಂತು ಜನಜೀವಿತವ ಮಾಡುದಾರದ ಮನವ – ಮಂಕುತಿಮ್ಮ|| 801 ||
ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ ನಿರ್ಮಮತೆಗೇರಿ ಕರ್ಮಾತೀತನಪ್ಪೆ ಬ್ರಹ್ಮಪದದಿಂದ ಧರ್ಮಾಧರ್ಮಗಳ ನಿಯಮ ನಿರ್ಮಾಲ್ಯವಾಗುವುದು – ಮಂಕುತಿಮ್ಮ|| 802 ||
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ – ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ ಬಲ್ಲವನೆ ಮುಕ್ತನಲ – ಮಂಕುತಿಮ್ಮ|| 803 ||