ಮಂಕುತಿಮ್ಮನ ಕಗ್ಗ (79 ರಿಂದ 83)

ಶೀರ್ಷಿಕೆ – ವಿಶ್ವಲೀಲೆ

ಬರೆವ ಹಲಗೆಯನೊಡೆದು ಬಾಲಕನು ತಾನದನು ಮರಳಿ ಜೋಡಿಪೆವೆನ್ನುತಾಯಾಸಗೊಳುತ ಸರಿ ಚೌಕಗೈವಾಟದಲಿ ಜಗವ ಮರೆವಂತೆ ಪರಬೊಮ್ಮ ಸೃಷ್ಟಿಯಲಿ – ಮಂಕುತಿಮ್ಮ|| 79 ||

ಚೀಟಿಯಾಟದ ಬಿನದಿ ತಾನೋರ್ವನಿರ್ವರವೊಲ್ ಆಟವಾಡುತಲಿ ತನ್ನೊರ್ತನವ ಮರೆವಾ ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ ಪಾಟಿಯಲಿ ಮರೆತಿಹನು.- ಮಂಕುತಿಮ್ಮ|| 80 ||

ಮರೆತಿಹನೆ ಬೊಮ್ಮ ? ಮರೆತಿಲ್ಲ; ಮರೆತವೊಲಿಹನು ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ ದೊರೆವರೆಗಾಯಸವೊ – ಮಂಕುತಿಮ್ಮ|| 81 ||

ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು ಎನ್ನನರಸಿ ಬನ್ನಿ ಮಕ್ಕಳಿರ ಬೇಗ ಬನ್ನಿರಾಟವ ಬೇಡವೆಂಬುವರ ನಾಂ ಬಿಡೆನು ಎನ್ನುವಜ್ಜಿಯೋ ಬೊಮ್ಮ – ಮಂಕುತಿಮ್ಮ|| 82 ||

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ ತಾನದಾರೊಳೋ ವಾದಿಸುವನಂತೆ ಬಾಯಿಂ ದೇನನೋ ನುಡಿಯುತ್ತ ಕೈಸನ್ನೆಗೈಯುವನು ಭಾನವೊಂದರೊಳೆರಡು – ಮಂಕುತಿಮ್ಮ|| 83 ||

Leave a Reply

Your email address will not be published. Required fields are marked *