ಶೀರ್ಷಿಕೆ – ಅಂತರಂಗ ಒಲವು
ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ ಸಿಳುಕದೆಮ್ಮೆಯ ತರ್ಕಕರ್ಕಶಾಂಕುಶಕೆ ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ ತಿಳಿಮನದೆ ನೋಳ್ಪಂಗೆ – ಮಂಕುತಿಮ್ಮ|| 54 ||
ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ ನರನುಮಂತೆಯೇ ಮನಸಿನನುಭವದಿ ಕಾಣುವನು ಪರಸತ್ವಮಹಿಮೆಯನು – ಮಂಕುತಿಮ್ಮ|| 55 ||
ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ ಭೂಲೋಕದರಚು ಕೆಳಗಿಂ ಮೂಳೆಯಳುವು ಕೇಳಬರುತೀ ಮೂರುಕೂಗೆನ್ನ ಹೃದಯದಲಿ ಮೇಳಯಿಸುತಿದೆ ಸಂತೆ – ಮಂಕುತಿಮ್ಮ|| 56 ||
ಆಗುಂಬೆಯಸ್ತಮಯ ದ್ರೋಣಪರ್ವತದುದಯ ತ್ಯಾಗರಾಜನ ಗಾಂ ವಾಲ್ಮೀಕಿ ಕವನ ಆಗಿಸವೆ ತಾವಿವೆಮ್ಮತರಂಗದಿ ಯೋಗಪುಲಕಾಂಕುರವ? – ಮಂಕುತಿಮ್ಮ|| 57 ||
ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ ನೊಳದನಿಯದೊಂದರಿಂ – ಮಂಕುತಿಮ್ಮ|| 58 ||