ಮಂಕುತಿಮ್ಮನ ಕಗ್ಗ (489 ರಿಂದ 493)

ಶೀರ್ಷಿಕೆ – ಸಾಧನೋಪಾಯ

ಕಣ್ಣಿರದೆ ರವಿಯೇನು? ರವಿಯಿರದೆ ಕಣ್ಣೇನು? ಅನ್ಯೋನ್ಯ ಸಹಕೃತಿಯಿನುಭಯ ಸಾರ್ಥಕತೆ ನಿನ್ನಾತ್ಮ ಜಗದಾತ್ಮಕಂತು ಸಂಬಂಧವವು ವಹ್ನಿಸ್ಫುಲ್ಲಿಂಗಗಳೊ –ಮಂಕುತಿಮ್ಮ|| 489 ||

ಬಹಿರದ್ಭುತವ ಮನುಜರಂತರದ್ಭುತವರಿತು ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ಬಹುಪರಿಯುಪಾಗಳ ನಿರವಿಸಿಹರದಕೇಕೆ ಗಹಗಹಿಸುವೆಯೊ, ಮರುಳೆ ಮಂಕುತಿಮ್ಮ|| 490 ||

ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ಬಿಂಬದೊಳಗಮಿತ ಸತ್ವವ ಪಿಡಿದಿಡುವ ಭಕ್ತಿ- ಯಿಂಬು ಕಿಂಚಿನ್ಮತಿಗೆ – ಮಂಕುತಿಮ್ಮ|| 491 ||

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ ಸಹಭಾವವದಕೆ ಸರಿ – ಮಂಕುತಿಮ್ಮ|| 492 ||

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ ಮಹಿಮೆಯಲ್ಲೇನೆಂದು ಸಂಶಯಿಸಬೇಡ ವಿಹಿತಗೈದವರಾರು ವಸತಿಯಂ ದೈವಕ್ಕೆ? ಮಹಿಮೆ ಮನಸೋತೆಡೆಯೆ- ಮಂಕುತಿಮ್ಮ|| 493 ||

Leave a Reply

Your email address will not be published. Required fields are marked *