ಶೀರ್ಷಿಕೆ – ಭೂವ್ಯೋಮ ಯಂತ್ರ
ನಾವುಣ್ಣುವನ್ನಗಳು ನಾವು ಕುಡಿವುದಕಗಳು ನಾವುಸಿರುವೆಲರುಗಳು ನಾವುಡುವ ವಸ್ತ್ರ ಭೂವ್ಯೋಮಗಳ ಯಂತ್ರಸಂಘದುತ್ಪನ್ನಗಳು ಜೀವವಿವೆರಡರ ಶಿಶುವು – ಮಂಕುತಿಮ್ಮ|| 119 ||
ಪಾಕ ನಿನ್ನೊಳದೊಂದು ಸಾಗುತಿಹುಡೆದೆಬಿಡದೆ ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ಸಾಕುಬೇಕುಗಳೆಲ್ಲವದರಿನಾ ಯಂತ್ರವನ್ನು ಏಕೆ ರಚಿಸಿದನೋ ವಿಧಿ – ಮಂಕುತಿಮ್ಮ|| 120 ||
ತನುವೇನು? ಮನವೇನು? ಪರಮಾಣು ಸಂಧಾನ ಕುಣಿಸುತಿಹುದುಭಯವನು ಮೂರನೆಯದೊಂದು ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು ದಣಿಯದದನರಸು ನೀಂ – ಮಂಕುತಿಮ್ಮ|| 121 ||
ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು ಒಣಗಿದಂತಿರುವ ತೃಣಮೂಲ ಮೊಳೆಯುವುದು ಮನುಜರಳಿವರು ಮರುಸಂತಾನ ನಿಂತಿಹುದು ಅಣಗದಾತ್ಮದ ಸತ್ವ – ಮಂಕುತಿಮ್ಮ|| 122 ||
ಬನ್ನಬವಣೆಗಳ ತಾನೆನಿತೆನಿತು ಪಟ್ಟಿರೆಯು ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ ಸನ್ನಿಹಿಸುವಂ ಸುಮ್ಮನಿರಲೊಲದೆ ಮಾನವನು ಚಿನ್ಮಯತೆಯಾತ್ಮಗುಣ – ಮಂಕುತಿಮ್ಮ|| 123 ||