ಮಂಕುತಿಮ್ಮನ ಕಗ್ಗ (104 ರಿಂದ 108)

ಶೀರ್ಷಿಕೆ – ಅನಂತ ಚೌಕಟ್ಟು-ಸಾಂತ ಚಿತ್ರ

ಕಾಲವಕ್ಷಯದೀಪವದರ ಪಾತ್ರೆಯಪಾರ ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು ತೈಲಧಾರೆಯಖಂಡ – ಮಂಕುತಿಮ್ಮ|| 104 ||

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು ಚಿತ್ರವಿಲ್ಲದ ಭಿತ್ತಿ ಸೊಗಸಹುದೆಂತು ನಿತ್ಯಸತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ ತತ್ವವೀ ಸಂಬಂಧ – ಮಂಕುತಿಮ್ಮ|| 105 ||

ಚೌಕಟ್ಟನಂತವದರೊಳು ಚಿತ್ರಪಟ ಸಾಂತ ಸಾಕಾರ ಘನತತಿ ನಿರಾಕಾರ ನಭದಿ ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ ಲೆಕ್ಕ ತಾತ್ವಿಕನಿಗಿದು – ಮಂಕುತಿಮ್ಮ|| 106 ||

ಅಜ್ಞಾತವಾದುದನುಭಾವವೆನೆ ನಾಸ್ತಿಕನು ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ ಸ್ವಜ್ಞಪ್ತಿ ಶೋಧಿ ಮುನಿ – ಮಂಕುತಿಮ್ಮ|| 107 ||

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು ವೆಡೆಯಲ್ಲ ಜಡಲೋಕ ಕಲ್ಲು ಕಡ್ಡಿ ಕಸ ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ ಜಡವೆ ಜೀವದ ವಸತಿ – ಮಂಕುತಿಮ್ಮ|| 108 ||

Leave a Reply

Your email address will not be published. Required fields are marked *